ಶಿವರಾಜ್ ಕುಮಾರ್ ಬಗ್ಗೆ ಓಪನ್ ಆಗಿ ಮಾತನಾಡಿದ ಸುದೀಪ್ | Filmibeat Kannada

2017-12-11 4,442

Actor Sudeep spoke about his old controversy with Shivarajkumar. Sudeep gives few clarifications about the differences he had with Dr. Raj Family.


ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಈಗ ಒಟ್ಟಿಗೆ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಅವರಿಬ್ಬರ ಮಧ್ಯೆ ಸ್ನೇಹ ಇದೆ. ಆದರೆ ಈ ಹಿಂದೆ ಶಿವಣ್ಣ ಮತ್ತು ಸುದೀಪ್ ನಡುವೆ ಅಷ್ಟಕಷ್ಟೆ ಎನ್ನುವ ಸುದ್ದಿ ಇತ್ತು. 'ರಾಜ್ ಕಪ್ ಕ್ರಿಕೆಟ್' ಸಮಯದಲ್ಲಿ ನಡೆದ ಘಟನೆಯ ನಂತರ ಶಿವಣ್ಣ ಸುದೀಪ್ ನಡುವೆ ಮನಸ್ತಾಪ ಇದೆ ಎಂಬ ಅನೇಕ ವದಂತಿ ಇತ್ತು. ಆದರೆ ಈಗ ಆ ವಿಷಯದ ಬಗ್ಗೆ ಮತ್ತೆ ಸುದೀಪ್ ಮಾತನಾಡಿದ್ದಾರೆ. ಪತ್ರಕರ್ತ ಹಾಗೂ ಲೇಖಕ ಜೋಗಿ ಬರೆದಿರುವ 'ನಾನು ಪಾರ್ವತಿ' ಎಂಬ ಹೊಸ ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಬಗ್ಗೆ ಬರೆದ ಪುಸ್ತಕ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಸುದೀಪ್ ಅತಿಥಿ ಆಗಿದ್ದರು. ಈ ವೇಳೆ ಪುಸ್ತಕದ ಬಗ್ಗೆ ಮಾತು ಶುರು ಮಾಡಿದ ಸುದೀಪ್ ''ನಾನು ಓಪನ್ ಆಗಿ ಮಾತಾಡ್ಲಾ'' ಎಂದು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.